Add new comment

Anonymous
 - 
Thursday, 1 Mar 2018

ಯು. ಟಿ ಖಾದರ್ ಓರ್ವ ಶಾಸಕ ಹಾಗೂ ಸಚಿವ ಎಂಬ ಕಾರಣಕ್ಕಾಗಿ ಅವರನ್ನು ಎಲ್ಲಾ ಜಾತಿ, ಮತ, ಧರ್ಮ ಪಂಗಡದವರು ಅವರವರ ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಜನ ಪ್ರತಿನಿಧಿ ಎಂಬ ನೆಲೆಯಲ್ಲಿ ಖಾದರ್‌ರವರು ದೇವಸ್ಥಾನ, ದೈವಸ್ಥಾನ, ಚರ್ಚು, ಮಸೀದಿ, ಉರೂಸ್, ಸುನ್ನಿ, ಎಪಿ, ಈಕೆ, ಸಲಫಿ, ಜಮಾತೆ ಇಸ್ಲಾಂ ಎಂಬ ಬೇಧ ಬಾವ ಇಲ್ಲದೆ  ಭಾಗವಹಿಸುತ್ತಾರೆ. ಅವರವರ ನಂಬಿಕೆಗಳನ್ನು ಗೌರವಿಸುತ್ತಾರೆ. ಅಂತೆಯೇ ಕೆಲ ದಿನಗಳ ಹಿಂದೆ ತಮ್ಮ ಕ್ಷೇತ್ರದ ಕೊರಗಜ್ಜ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಪ್ರತೀ ವರ್ಷವೂ ಅವರು ಆಹ್ವಾನಿಸುತ್ತಾರೆ ಮತ್ತು ಖಾದರ್ ಭಾಗವಹಿಸಿತ್ತಾರೆ ಇದನ್ನೇ ನೆಪವಾಗಿಸಿಕೊಂಡು  ಕೆಲವರು ವಿದೇಶದಿಂದ ಸಾಮಾಜಿಕ ಜಾಲತಾಣದ ಮೂಲಕ ನಿರಂತರ ಖಾದರ್‌ರವರನ್ನು ಅತ್ಯಂತ ಹೀನಾಯವಾಗಿ ಹಿಯ್ಯಾಳಿಸಲು ತೊಡಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಅದನ್ನು ಗಮನಿಸಿರಬಹುದು.  ಖಾದರ್‌ರವರನ್ನು ಹಿಯ್ಯಾಳಿಸಲು ಅವರು ಬಳಸುತ್ತಿದ್ದ ಶಬ್ದ ಮತ್ತು ಭಾಷೆ ಯಾರನ್ನೂ ಒಮ್ಮೆ ರೊಚ್ಚಿಗೆಬ್ಬಿಸುವಷ್ಟು ಕೆಟ್ಟದ್ದಾಗಿರುತಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಬರುತ್ತಿದ್ದ ಬರಹಗಳೂ ಅಷ್ಟೇ ಪ್ರಚೋದನಾತ್ಮಕ ವಾಗಿರಿತ್ತಿತ್ತು.

ಈ ಎಲ್ಲಾ ವಿಚಾರವನ್ನು ಉಲ್ಲೇಖಿಸುತ್ತಾ, ಅವರಿಗೇ ಸಂಬಂಧಿಸಿ ಉರೂಸ್ ಸಮಾರಂಭದ ವೇದಿಕೆಯಲ್ಲಿ ಖಾದರ್‌ರವರು... "ಊರಲ್ಲಿ ಮೋಸಮಾಡಿ ವಿದೇಶಕ್ಕೆ ಹೋಗಿ ಕುಳಿತು ನನಗೆ ಬುದ್ದಿ ಹೇಳುತ್ತಿದ್ದಾರೆ. ನಾನು ಎಲ್ಲಾ ಕಡೆ ಹೋಗಿದ್ದೇನೆ, ಹೋಗುತ್ತೇನೆ .. ನಾನು ತಪ್ಪಿದರೆ ನನ್ನನ್ನು ತಿದ್ದಲು ಉಲೆಮಾಗಳಿದ್ದಾರೆ. ಈ ಲೋಫರ್ ಗಳಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ...." ಎಂದು
ಹೇಳಿದ್ದಾರೆ.

ಈ ವಿಡಿಯೋದ ತುಣುಕನ್ನು ವೈರಲ್ ಮಾಡಿ ವಿದೇಶದಲ್ಲಿರುವ ಎಲ್ಲಾ ಪ್ರವಾಸಿಗಳನ್ನು ಖಾದರ್ ಅವಮಾನ ಮಾಡಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈಗಲು ಕೆಲವರು ಖಾದರ್ ವಿರುಧ್ಧದ ತಮ್ಮ ಬರಹ ಹಾಗೂ ವಾಯ್ಸ್ ಮೆಸ್ಸೇಜುಗಳಲ್ಲಿ ತೀರಾ ಕೆಟ್ಟ ಶಬ್ಧ ಭಾಷೆ ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಮರ್ಯಾದೆಯನ್ನು ಮೀರಿ ನಡೆಯುತ್ತಿರು ಖಾದರ್ ಪರ ವಿರೋಧ ಚರ್ಚೆಗಳು ಸಮುದಾಯದ ಮಾನ ಹರಾಜು ಹಾಕುತ್ತಿದೆ ಇದು ಇಲ್ಲಿಗೇ ನಿಲ್ಲಲಿ ಎಂಬುದು ಎಲ್ಲಾ ಪ್ರಜ್ಞಾವಂತ ಮುಸ್ಲಿಮರ ಅಪೇಕ್ಷೆ.