Add new comment

Muneer Katipalla
 - 
Tuesday, 10 Jul 2018

ಮುತ್ಸದ್ದಿ, ಹಿರಿಯ ರಾಜಕಾರಣಿ, ಜಾತ್ಯಾತೀತ ಸಿದ್ದಾಂತದ ಪ್ರಬಲ ಪ್ರತಿಪಾದಕ ಬಿ ಎ ಮೊಯಿದ್ದೀನ್ ರವರ ನಿಧನ ದುಃಖಕರ. ಜಾತ್ಯಾತೀತತೆ, ಪ್ರಾಮಾಣಿಕತೆ, ಸರಳತೆಗಳು ರಾಜಕಾರಣದಲ್ಲಿ, ಸಮಾಜದಲ್ಲಿ ನಿಧಾನಕ್ಕೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಒಂದು ಸಂಕೇತದಂತೆ ನಮ್ಮ ನಡುವೆ ಬದುಕಿದ್ದ ಶ್ರೀಯುತರ ನಿಧನ ನಿಜಕ್ಕೂ ಸಮಾಜಕ್ಕಾದ ಬಹುದೊಡ್ಡ ನಷ್ಟ.
ಓರ್ವ ಉದಾರವಾದಿ  ಮುಸಲ್ಮಾನರಾಗಿದ್ದ ಮೊಯಿದ್ದೀನ್ ರವರು ಇತ್ತೀಚೆಗೆ ಯುವಜನರು ಹೆಚ್ಚು ಹೆಚ್ಚು ಮತೀಯವಾದದತ್ತ ಆಕರ್ಷಿತರಾಗುತ್ತಿರುವುದರ ಕುರಿತು ಆತಂಕಿತರಾಗಿದ್ದರು. ಶಿಕ್ಷಣಕ್ಕೆ ಅಪಾರ ಮಹತ್ವ ನೀಡುತ್ತಿದ್ದ ಅವರು ಶೈಕ್ಷಣಿಕವಾಗಿ ಹಿಂದುಳಿದಿದ್ದ ಬ್ಯಾರಿ ಸಮುದಾಯ ಶಿಕ್ಷಣದಲ್ಲಿ ಮುಂದಕ್ಕೆ ಬರಬೇಕು ಎಂಬ ತುಡಿತ ಹೊಂದಿದ್ದರು. ಆ ಕುರಿತು ಪ್ರಾಮಾಣಿಕವಾಗಿ ತನ್ನ ಕೊಡುಗೆ ನೀಡಿದ್ದರು.
dyfi ಸಂಘಟನೆಯ ಹಿತೈಷಿಯಾಗಿ ಯುವಜನ ಚಳುವಳಿಯನ್ನು ಪ್ರೋತ್ಸಾಹಿಸುತ್ತಿದ್ದ ಬಿ ಎ ಮೊಯಿದ್ದೀನ್ ಅವರ ಅಗಲಿಕಗೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಭಾವಪೂರ್ಣ ಸಂತಾಪ ಸಲ್ಲಿಸುತ್ತದೆ .